ಪಯಣಿಗನ ನೋಟ

 ನಾವು ಪಡೆಯುವ ಶಿಕ್ಷಣ ನಮ್ಮ ತಂದೆ-ತಾಯಿಗಳು ಕೈಯನ್ನು ಚಾಚುವಂತೆ ಮಾಡಬಾರದು. ಇದನ್ನು ಯಾಕೆ ನಾನು ಹೇಳತಾ ಇದಿನಿ‌ ಅಂದ್ರೆ, ನಾನು‌ ಹೊಸಪೇಟೆಯಿಂದ ನಮ್ಮೂರಿಗೆ ಪ್ರಯಾಣ ಮಾಡುವಾಗ ನನ್ನಷ್ಟಕ್ಕೆ ನಾನೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಯಾರೋ ಒಬ್ಬ ಅಜ್ಜ ಅಥವಾ ಅಜ್ಜಿ ಬಸ್ ಸ್ಟ್ಯಾಂಡ್ ನಲ್ಲಿ ಬಂದು ಹಣ ಕೇಳಿದಾಗ ನನಗೆ ಹೊಳೆಯುವ ಮೊದಲ ಪ್ರಶ್ನೆ ಏನೆಂದರೆ ಇದಕ್ಕೆ ಕಾರಣ ನಾವು ಬದುಕುತ್ತಿರುವ ಸಮಾಜನಾ? ಅಥವಾ ನಾವು ಶಿಕ್ಷಕರಾಗಿ ನಾವು ಸರಿಯಾದ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣವನ್ನು ನೀಡುತ್ತಿಲ್ಲವೇ? ತಾವು ಬೆಳೆದು ಬಂದ ಕುಟುಂಬದ ಪಾತ್ರವಿದೆಯೋ? ನಮ್ಮನ್ನಾಳುವ ಸರಕಾರದ‌ ತಪ್ಪಿದೆಯೋ? ಇಷ್ಟೇಲ್ಲ ಪ್ರಶ್ನೆಗಳು ನನ್ನನ್ನು ಕಾಡತಾ ಇರುತ್ತವೆ. ಆಗ ನನಗನಿಸಿದ್ದು ಆ ಒಂದು‌ ಪರಿಸ್ಥಿತಿಗೆ ನಾವೆಲ್ಲರೂ ಕಾರಣೀಭೂತರು. ಆಗ ತಕ್ಷಣ ನೆನಪಿಗೆ‌ ಬರುವುದು ಮಕ್ಕಳು ಅವರನ್ನು ಮುಪ್ಪಿನ ಅವಸ್ಥೆಯಲ್ಲಿ ನೋಡಿಕೋಳ್ಲುತ್ತಿಲ್ಲ.

ಇನ್ನೋಂದು ಕಡೆಯಲ್ಲಿ ದುಡಿಯುವ ಶಕ್ತಿ ಇದ್ದರೂ ದುಡಿಯದೇ ಬೇರೆಯವರಿಗೆ ಹಣ ಬೇಡುತ್ತಾರೆ. ಆಗ ಒಂದು ಮನಸ್ಸು ಕೊಡು ಎಂದು ಹೇಳಿದರೆ, ಇನ್ನೋಂದು ಮನಸ್ಸು ಬೇಡ ಆ ವ್ಯಕ್ತಿ ಕೆಟ್ಟದ್ದಕ್ಕೆ ಉಪಯೋಗಿಸಿಕೊಂಡರೆ ಹೇಗೆ ? "ಅಣ್ಣಾ, ಊರಿಗೆ ಹೋಗಲು ಹಣ ಇಲ್ಲಾ" ಎಂದು‌ ಬೇಡಿಕೊಂಡಾಗ ಕೊಡಬೇಕು ಅನಿಸುತ್ತದೆ ಏಕೆಂದರೆ ಅವನು ಯಾವುದಕ್ಕಾದರೂ ಉಪಯೋಗಿಸಲಿ ಅಂತ. ಆದರೆ, ನಾವೇ ಅವನನ್ನು ಕೆಟ್ಟ ದಾರಿಗೆ ಕಳಿಸತಾ ಇದಿವಿ ಅನಸತ್ತೆ.  ಯಾಕೆಂದರೆ, ಹಲವಾರು ಸಾಹಿತ್ಯಕ ಸಿನೇಮಾಗಳನ್ನು ನೀಡಿದ್ದರಿಂದ ಅದರ ಮೂಲಕವಾಗಿ ಮನಸ್ಸು ಉಭಯ ಸಂಕಟದಲ್ಲಿ ಸಿಲುಕಿ ಬಿಡುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಹಿರಿಯರು ಬಂದರೆ ನಮಗೆ ಸಾಧ್ಯವಾದಷ್ಟು ಸಹಾಯ ಮಾಡೋಣ. 

ಈ ಒಂದು ವಿಚಾರ ನನಗೆ ಹೊಳೆಯಲು ಒಂದು ವರ್ಷದ ಹಿಂದೆ ನೋಡಿದ ಕನ್ನಡದ ಪ್ರಶಸ್ತಿಗಳನ್ನು ಪಡೆದ ಸಿನೇಮಾ. ಆ ಸಿನಿಮಾವನ್ನು  ನೆನಪಿಸಿಕೊಳ್ಳಲು ಎರಡು ದಿನ ಪ್ರಯತ್ನಿಸಿದರೂ ನೆನಪಿಗೆ ಬರತಾ ಇಲ್ಲ. ಆ ಒಂದು ಸಿನೇಮಾದಲ್ಲಿ ತನ್ನ ಮಗನ ಶವವನ್ನು ಬೆಂಗಳೂರಿನಿಂದ ತನ್ನೂರಿಗೆ ಸಾಗಿಸಲು ಹಣವಿಲ್ಲದ್ದರಿಂದ ಮಗನ‌ ಶವವನ್ನು ಅಲ್ಲೇ ಸಿಕ್ಕ ಒಂದು ಟ್ರಂಕ್ನಲ್ಲಿ ಹಾಕಿಕೊಂಡು ಹೆದ್ದಾರಿಯ ಮುಖಾಂತರ ಎಲ್ಲರಿಗೂ ವಿನಂತಿಯನ್ನು ಮಾಡಿಕೊಳ್ಳುತ್ತಾನೆ. ಯಾರೂ ಅವನನ್ನು ಕರೆಕೊಂಡು ಹೋಗುವದಿಲ್ಲ. ಕೋನೆಗೆ, ಇಬ್ನರೂ ಪ್ರಯಾಣಿಕರಿದ್ದ ಒಂದು ಕಾರು ಬಂದು ಅವರು ಆ ಟ್ರಂಕ್ ದಲ್ಲಿ ಹಣವಿರಬಹುದೆಂದು ಅವನು ಮತ್ತು ಟ್ರಂಕ್ ನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರಿಬ್ಬರು ಎಷ್ಟೇ ಪ್ರಯತ್ನಿಸಿದರೂ ಟ್ರಂಕ್ನಲ್ಲಿರುವುದರ ಬಗ್ಗೆ ಮಾತ್ರ ಹೇಳುವುದಿಲ್ಲ.  ಆ ಇಬ್ಬರೂ ಹೆದ್ದಾರಿ ಪಕ್ಕದಲ್ಲಿ ಟೀ ಕುಡಿಯಲು ಕರೆದರೂ ಹೋಗುವುದಿಲ್ಲ. ಆ ಅವರಿಗೆ ಇನ್ನಷ್ಟು ಸಂಶಯ ಬರುತ್ತದೆ. ಕೆಲವೇ ನಿಮಿಷಗಳಲ್ಲಿ  ಅವನ ಊರು ಬಂದ ಬಿಡುತ್ತದೆ. ಅವನ ಹೆಂಡತಿ ಆಸ್ಪತ್ರೆಯಿಂದ ಮಗನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ಆದರೆ, ಅವಳ ಗಂಡ ಟ್ರಂಕ್ ತೆಗೆದುಕೊಂಡು ಬಂದಾಗ ತಾಯಿಯ Heart ಜಲ್ಲೆಂದು ಬಿಡುತ್ತದೆ. ಇಬ್ಬರೂ ಕೂಡಿ ಮಗನ ಶವ ಸಂಸ್ಕಾರ ಮಾಡುತ್ತಾರೆ. ಈ ಒಂದು ಸಿನೆಮಾ ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಿದೆ.

೧೧.೦೮.೨೦೨೦




Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು