ವಠಾರ ಶಾಲೆ, ದುರಗಮ್ಮ ದೇವಸ್ಥಾನ ಜನವಸತಿ ಕೇಂದ್ರ, ವ್ಯಾಸನಕೆರೆ

 ಒಂದು ಕಾಲದಲ್ಲಿ ಶಿಕ್ಷಕರ ಬಳಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಾ ಇದ್ದರು. ಆದರೆ ಇಪ್ಪತ್ತೊಂದನೆ ಶತಮಾನದಲ್ಲಿ ವಿದ್ಯಾರ್ಥಿಗಳನ್ನು‌ ಮನೆ ಮನೆಗೆ ಹುಡುಕುತ್ತಾ ಹೋಗಿ, ಅವರು ಇರುವ ಜನವಸತಿಗೆ ಹೋಗಿ ಪಾಠ ಮಾಡಬೇಕಾಗಿದೆ. ನಮ್ಮ ಶಾಲೆಯಲ್ಲಿ‌ ಆಟದ ಮೈದಾನ ಹೋರತು ಎಲ್ಲ ಸೌಲಭ್ಯಗಳು ಇವೆ. ಆದರೆ, ವಿದ್ಯಾರ್ಥಿಗಳು ಶಾಲೆಯ ಕಡೆಗೆ ಬರಲು ಹಿತಾಸಕ್ತಿ ತೋರಿಸುತ್ತಿದ್ದಾರೆ. ಅವರ ನಿರಾಸಕ್ತಿಯ ಹಿಂದೆ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ. ನಾವು ಮೊದಲು ಪಾಲಕರಿಗೆ ತಿಳಿಹೇಳಿ ಮಕ್ಕಳನ್ನು ಶಾಲೆಯ ಕಡೆಗೆ ಸೆಳೆಯುವ ಪ್ರಯತ್ನ ಮಾಡಬೇಕಾಗಿದೆ. ಶಿಕ್ಷಕರಾದ ನಾವು ಪಾಲಕರಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸಲಹೆ ನೀಡಬೇಕಾಗಿದೆ. ಅಂದಾಗ ಮಾತ್ರ ಪಾಲಕರಲ್ಲಿ ಶಿಕ್ಷಕರ‌ ಬಗ್ಗೆ , ಶಾಲೆಯ ಬಗ್ಗೆ ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಳಜಿ ಮತ್ತು ಪ್ರೀತಿ ಉಂಟಾಗುತ್ತದೆ. ಈ ಮೇಲೆ ಹೇಳಿದ ವಿವರಿಸಿದ ವಿಚಾರಗಳು ನನ್ನ ವಿಚಾರಗಳಾಗಿವೆ.








Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು