ಕಷ್ಟದ ಬದುಕು
ರಷ್ಯಾ ದೇಶದ ಖ್ಯಾತ ಬರಹಗಾರ ಹೇಳುವಂತೆ, "ಕಷ್ಟಗಳ ಮಧ್ಯೆನೇ ಬೆಳಕು ತೂರಿ ಬರುತ್ತದೆ". ನಿಜವಾಗಿಯೂ ಮನುಷ್ಯನಿಗೆ ಕಷ್ಟಗಳು ಬಂದಾಗ ಹೆದರದೆ, ಅವುಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಏಕೆಂದರೆ ಕಷ್ಟಗಳು ನಮ್ಮ ಮನಸ್ಸನ್ನು ಗಟ್ಟಿಗೊಳಿಸುತ್ತವೆ. ಹಾಗಾಗಿ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮನಸ್ಥಿತಿಯನ್ನು ಹೊಂದಿರಬೇಕು.
ನನಗೆ ಕಷ್ಟಗಳು ಬದುಕುವ ಕಲೆಯನ್ನು ಕರಗತ ಮಾಡಿಕೊಟ್ಟಿವೆ. ನಾನು ಏಳನೇ ತರಗತಿ ಇರಬಹುದು ಆಗ ನಮ್ಮೂರಿನಲ್ಲಿ ಮಳೆಯಾಗದೆ ಬರಗಾಲ ಸಂಭವಿಸಿತ್ತು. ಆದ ಕಾರಣ ನಮ್ಮ ಮನೆಯ ಬೆನ್ನೆಲುಬಾದ ನನ್ನ ತಂದೆ ಮತ್ತು ಮೂರು ತಿಂಗಳಿನ ಹಿಂದೆ ತೀರಿಕೊಂಡ ದೊಡ್ದಪ್ಪನೊಡನೆ ಎರಡು ಎತ್ತುಗಳೊಂದಿಗೆ ಬಿದರಿ ಗ್ರಾಮದಲ್ಲಿ ಎರಡು ಎಕರೆ ಹೋಲ ಮಾಡಿಕೊಂಡು ಶೇಂಗ ಬೇಳೆಯನ್ನು ಬೆಳೆದೆವು. ಎರಡು ವರ್ಷಗಳ ಕಾಲ ನಮ್ಮ ತಂದೆಯವರು ತಾವೇ ಊಟ ಮಾಡಿಕೊಂಡು ನನಗೂ ಮಾಡಲು ಕಲಿಸಿದರು. ಉತ್ತಮ ಫಸಲು ಪಡೆದು ಎರಡು ಎಮ್ಮೆಗಳೊಂದಿಗೆ ನಮ್ಮ ಊರಿಗೆ ವಾಪಸ್ ಆಗುತ್ತಿದ್ದಾಗ ಗದ್ಯಾಳದ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಎಮ್ಮೆ ಸತ್ತು ಬಿಟ್ಟಿತು. ಒಂದು ಎಮ್ಮೆ ಮತ್ತು ಎತ್ತುಗಳೊಂದಿಗೆ ಊರಿಗೆ ವಾಪಸಾದೆವು. ಆಗ ನಮ್ಮ ಕುಟುಂಬ ೫ ಲಕ್ಷ ರೂಪಾಯಿಗಳ ಸಾಲದಲ್ಲಿ ಸಿಲುಕಿದಾಗ ನಮಗೆ ಯಾವ ಸಂಬಂಧಿಕರೂ ಸಹಾಯ ಮಾಡಲಿಲ್ಲ. ಆ ಒಂದು ಸಮಯದಲ್ಲಿ ಎರಡೂ ಲಕ್ಷ ರೂಪಾಯಿಯ ಸಲುವಾಗಿ ಹೋಲವನ್ನು ನೋಂದ ಮಾಡಿ ಕೊಟ್ಟೆವು. ನನಗೆ ನಮ್ಮ ಅಜ್ಜ ಹೇಳುವಂತೆ ನಮಗೆ ಎಷ್ಟೋ ಶ್ರೀಮಂತರಾದ ನನ್ನ ಸಂಬಂಧಿಕರರು ಸಹಾಯಕ್ಕೆ ಬರಲಿಲ್ಲ.
ಆ ಒಂದು ಸಂದರ್ಭದಲ್ಲಿ ನಮಗೆ ಸಹಾಯಕ್ಕೆ ಬಂದವರು ನನ್ನ ತಂದೆಯವರ ಸೋದರತ್ತೆ, ಮಲಕವ್ವ ಅಜ್ಜಿ. ಅವಳು ತಮ್ಮ ಮನೆಯಲ್ಲಿ ಹಲವಾರು ತಿಂಗಳು ಇರಿಸಿಕೊಂಡು ನಂತರದಲ್ಲಿ ರಾಮಣ್ಣ ಬಳೋಲದವರ ಮನೆಯಲ್ಲಿ ಇದ್ದು ಅಲ್ಲಿ ಅಪ್ಪಸಾಬ ಮಾಮಾನ ಸಹಕಾರದಿಂದ ನಮ್ಮ ತಂದೆ ೪ ಎಕರೆ ಕಬ್ಬಿನ ಹೊಲವನ್ನು ಮಾಡುತ್ತಾ ತಮ್ಮ ನಾಲ್ಕು ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸಿದರು. ನನ್ನ ತಂದೆಯಷ್ಟೆ ನನ್ನ ತಾಯಿಯು ಶ್ರಮ ಜೀವಿಯಾಗಿದ್ದಾಳೆ. ನಾನು ಇವತ್ತು ನಾಲ್ಕು ಮಕ್ಕಳಿಗೆ ವಿಧ್ಯಾಭ್ಯಾಸ ಹೇಳಿ ಕೊಡುತ್ತಾ ಇದ್ದಿನಿ ಅಂದರೆ ಅದಕ್ಕೆ ನನ್ನ ತಾಯಿ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ೮ ನೇ ತರಗತಿ ಇದ್ದಾಗ ನನ್ನ ತಂದೆಯೊಂದಿಗೆ ಪಾಯಿಪ್ ಲಾಯಿನ್ ಕೆಲಸಕ್ಕೆ ಹೋಗತಾ ನನ್ನ ತಂದೆಗೆ ಸಹಾಯ ಮಾಡುತ್ತಾ ಶಾಲೆಗೆ ಹೋಗತಾ ಇದ್ದೆ. ನನಗೆ ಆತ ಹಣಕಾಸಿನ ಸಹಾಯವನ್ನು ಮಾಡಿದ ಗಿರಮಲ್ಲ, ಯಮನಪ್ಪ ನಾವ್ಹಿ ಅವರನ್ನು ನನ್ನ ಜೀವನ ಪೂರ್ತಿ ಮರೆಯಲು ಸಾಧ್ಯವಿಲ್ಲ. ಆ ಇಬ್ಬರು ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಕಲಿಯಲು ಪ್ರೋತ್ಸಾಹಿಸಿದರು. ನನ್ನ ಅಮ್ಮ ನಾನು ೮ ನೇ ತರಗತಿ ಓದುತ್ತಿರುವಾಗ ಮುಂಜಾನೆ ಆರು ಗಂಟೆಯಿಂದ ೯ ಗಂಟೆಯವರೆಗೆ ಯಮನಪ್ಪ ಕಾಕನ ಹೊಲದಲ್ಲಿ ಕಸ ತೆಗೆದು ಶಾಲೆಗೆ ಹೋಗತಾ ಇದ್ದೆ. ಆಗ ಮೂರು ತಾಸಿಗೆ ಇಪ್ಪತ್ತು ರೂಪಾಯಿ ಕೂಲಿಯಾಗಿ ಕೊಡತಾ ಇದ್ದರು. ಅದು ನಮ್ಮ ಉಪ ಜೀವನಕ್ಕೆ ಸಹಾಯವಾಗತಾ ಇತ್ತು. ಹೇಗೊ ಎಂಟನೆಯ ತರಗತಿ ಮುಗಿಸಿದೆ. ಆ ಒಂದು ತರಗತಿಯಲ್ಲಿ ನನಗೆ ವಿಠ್ಠಲ ಆತ್ಮೀಯ ಗೆಳೆಯ ಇಗಲೂ ಕೂಡಾ.
ಶೂರಪಾಲಿಯಲ್ಲಿ ೯ ನೇ ತರಗತಿ ಇಲ್ಲದ ಕಾರಣ ತುಂಗಳ ಗ್ರಾಮದಲ್ಲಿ ಹತ್ತನೆ ತರಗತಿಯನ್ನು ೬೧ ಪ್ರತಿಶತದೊಂದಿಗೆ ವಸತಿ ನಿಲಯದಲ್ಲಿ ಇದ್ದುಕೊಂಡು ಮುಗಿಸಿದೆ. ಆಗ ನನಗೆ ಆತ್ಮೀಯರಾಗಿದ್ದವರು ಜ್ಞಾನೆಷ್ ಅಣ್ಣಾ ಮತ್ತು ಮಲ್ಲಿಕಾರ್ಜುನ. ಅವರು ನನಗೆ ಕಲಿಯಲು ಬಹಳ ಪ್ರೋತ್ಸಾಹ ನೀಡಿದರು. ಆಗ ನನ್ನ ಸಂಬಧಿಕರು ನನ್ನ ಫಲಿತಾಂಶದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನನಗೆ ಇಂಗ್ಲಿಷ್ ವಿಷಯ ಬಹಳ ಕಠಿಣ ವಿಷಯವಾಗಿತ್ತು. ಜ್ಞಾನೆಷ್ ಅಣ್ಣಾ ಬಿ.ಎ. ನಲ್ಲಿ ಇಂಗ್ಲಿಷ್ ತೆಗೆದುಕೊಳ್ಳಲು ಸಲಹೆ ನೀಡಿದರು. ನಂತರ ಮನೆಗೆ ಬಂದಾಗ ಎಲ್ಲರೂ ಬ್ಯೆಯತಾ ಇದ್ದರು. ನನ್ನ ತಂದೆ ನನ್ನ ಡಾಕ್ಟರ್ ಮಾಮಾನ ಮುಂದೆ ಏನ ಮಾಡಬೇಕು ಅಂತ ಕೇಳಿದಾಗ ಅವನು ನಿಮಗೆ ಸಾಯಿನ್ಸ ಮಾಡಲು ಹಣ ಹಾಕಾಕ ಆಗಲ್ಲ ಆರ್ಟ್ಸ್ ಮಾಡು ಅಂತ ಹೇಳಿದರು. ಆಗ ನಾನು ವಿಜ್ಞಾನ ಕಲಿಯಬೇಕೆಂಬ ಆಸಕ್ತಿ ಆದರೆ ಬೇರೆಯವರ ಸಲಹೆಯಂತೆ ಕಡಪಟ್ಟಿಯ ಆರ್ಟ್ಸ್ ಕಾಲೇಜಿಗೆ ನಮ್ಮ ನರಸಿಂಹ ಮಾಮಾ ಪ್ರವೇಶ ಪಡೆದುಕೊಂಡು ಕಂಬಿ ಸರ್ ಮನೆಯಲ್ಲಿ ರೂಮ ಮಾಡಿ ಕೊಟ್ಟರು. ಇದು ನನ್ನ ಜೀವನದ ಟರ್ನೀಂಗ್ ಪಾಯಿಂಟ್ ಅಂತ ಹೇಳಬಹುದು. ಆಗ ನನಗೆ ಕಂಬಿ ಸರ್ ಎರಡು ಜೊತೆ ಬಟ್ಟೆ ಕೊಡಿಸಿದ್ದು ಮತ್ತು ನನಗೆ ಆತ್ಮ ಸ್ಥ್ಯರ್ಯ ತುಂಬಿದ್ದು ಎಂದು ಮರೆಯಲಾಗದು. ಕಂಬಿ ಸರ್ ರೂಮನಲ್ಲಿ ನನಗೆ ಅಡಳ್ಳಿ ಸರ್ ಪರಿಚಯವಾಗಿ ಇರುವುದರೊಂದಿಗೆ ಕಂಪ್ಯೂಟರ್ ಕಲಿಯಲು ಸಾಯಕಲ್ ಮೇಲೆ ಹೋಗುತ್ತಾ ಇದ್ದೆವು. ಪಿ.ಯು.ಸಿ. ಎರಡನೆ ವರ್ಷದಲ್ಲಿ ಅಡಳ್ಳಿ ಸರ್ ದ್ವೀತಿಯ ದರ್ಜೆಯ ಸಹಾಯಕರಾಗಿ ಬಳ್ಳಾರಗೆ ಆಯ್ಕೆಯ ನಂತರ ನನಗೆ ಅವರ ಸಾಯಕಲ್ ಕೊಟ್ಟು ಕಲಿಯಲು ಪ್ರೋತ್ಸಾಹಿಸಿದರು. ಅದೇ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲುಕಿನ ಸ.ಹಿ. ಪ್ರಾ. ಶಾಲೆ , ವ್ಯಾಸನಕೆರೆ ಯಲ್ಲಿ ಇಂಗ್ಲಿಷ್ ಸ.ಶಿ. ನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
೧೬.೦೮.೨೦೨೦
Comments
Post a Comment