ಬಡತನದಲ್ಲಿ ಅರಳಿದ ಪ್ರತಿಭೆ
ಆತ್ಮೀಯ ಪಾಲಕರೇ, ನಮ್ಮ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದ ಬಡತನ ಕುಟುಂಬದಿಂದ ಬಂದ ಸಂಜು ಬಿರಾದಾರ , ಇವನು ಎಸ್.ಎಲ್.ಸಿ. ಯಲ್ಲಿ 625 ಅಂಕಗಳಿಗೆ 617 ಅಂಕಗಳನ್ನು ಪಡೆದು ರಾಜ್ಯಕ್ಕೆ 7 ನೇ Rank ಬಂದಿದ್ದಾನೆ. ಅವನು ಒಂದು ಮುರುಕು ಚಪ್ಪರದಲ್ಲಿ ಓದಿದ ಹುಡುಗ. ನಾನು ಕೂಡಾ ಇದೇ ಊರಿನಿಂದ ಬಂದವನು. ನಾನು ಯಾಕೆ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳತಾ ಇದ್ದಿನಿ ಅಂದ್ರೆ ಇದು ನಿಮ್ಮ ಮಕ್ಕಳಿಗೆ ಸ್ಪೂರ್ತಿಯಾಗಬಹುದೆಂದು ಅಂದುಕೊಂಡಿದ್ದೆನೆ. ಹಾಗಾಗಿ, ನೀಮ್ಮ ಮಕ್ಕಳು ಯಾರಿಗೇನು ಕಮ್ಮಿ ಇಲ್ಲ, ನೀವು ಕೂಡಾ ನನ್ನ ಮಗ / ಮಗಳು ದೊಡ್ಡ ಸಾಧನೆ ಮಾಡಬೇಕೆಂದು ಅಂದಕೊಂಡಿದ್ದಿರಿ. ಆ ದಿಸೆಯಲ್ಲಿ ನಿಮ್ಮ ಆಸೆಯನ್ನು ಇಡೆರೀಸಿಕೊಳ್ಳಲು ನಿಮ್ಮ ಮಕ್ಕಳನ್ನು ವಠಾರ ಶಾಲೆಗೆ ಕಳುಹಿಸಿ, ಅವರಿಗೆ ಪ್ರೀತಿಯಿಂದ ಮನೆಗೆಲಸ ಮಾಡಲು ಹೇಳಿರಿ. ನಿಮ್ಮ ಮಕ್ಕಳಿಗೆ ಓಳ್ಳೆಯ ಭವಿಷ್ಯವಿದೆ.
Comments
Post a Comment