ಸಾಬು ಮುತ್ಯಾನ(ಅಜ್ಜ) ನೆನಪು ಮಾತ್ರ.

ಸಾಬು ಮುತ್ಯಾನ(ಅಜ್ಜ) ನೆನಪು ಮಾತ್ರ.

ಅನುಭವದ, ಸರಳ ಸಜ್ಜನಿಕೆಯ, ನಮ್ಮ ಹಿರಿಯ ತಲೆಮಾರಿನ ಸಾಬು ಅಜ್ಜ ನಮ್ಮ ಕುಟುಂಬಕ್ಕೆ ಮರು ಜೀವ ನೀಡದ ಮಹಾನುಭಾವನ‌ ನೆನಪು ಸದಾ ನಮ್ಮೊಂದಿಗೆ ಇರುತ್ತದೆ. ನಮ್ಮ ತಂದೆಯವರು ಅಜ್ಜನಿಗೆ ನಿಮ್ಮ ಆಶೀರ್ವಾದದಿಂದ ಎಂದಾಗ ಅವರ ಬಾಯಿಯಿಂದ ಬರುವ ಮೊದಲ ಮಾತು, "ಎಲ್ಲಾ ದೇವರ ದಯೆ." ನಮ್ಮ ಕುಟುಂಬದೊಂದಿಗೆ ಅಜ್ಜ ಮತ್ತು ಅಜ್ಜಿಯ ಅತ್ಯಂತ ಅವಿನಾಭಾವ ಸಂಬಂಧ 8 ವರ್ಷಗಳವರೆಗೆ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಮಲಕವ್ವ ಅಜ್ಜಿಯು ನನ್ನ ತಂದೆಯ ಅತ್ತೆಯಾಗಿದ್ದು ಅವನನ್ನು ಬಹಳ ಪ್ರೀತಿಯನ್ನು  ಯಾವುದೇ ತರಹದ ಪಲಾಪೇಕ್ಷೇಯಿಲ್ಲದೆ ತೋರಿಸುತ್ತಿದ್ದರು. ಅಜ್ಜ ಮತ್ತು ಅಜ್ಜಿಯ ಒಂದು ವಿಶೇಷತೆ ಏನೆಂದರೆ ಅವರ ಮನೆಯು ದಾಸೋಹದ ಮನೆಯಾಗಿತ್ತು. ನಾವು ಯಾರೇ ಮನೆಗೆ ಹೋದರೆ ಊಟ ಮಾಡಿಸದೇ ಬಿಡುತ್ತಿರಲಿಲ್ಲ. ನನ್ನ ತಂದೆಯವರು ಸಾಯಂಕಾಲ ಊರಿಗೆ ಹೋರಟರೆ, ಆದಷ್ಟು ಬೇಗ ಊಟ ಮಾಡಿಸಿ ಕಳಿಸಿರಿ ಎಂದು ಅತ್ತೆಗೆ ಹೇಳುತ್ತಿದ್ದರು. ಅಜ್ಜನ‌ ಬಗ್ಗೆ ಹೇಳಲು ತಡಗಿದರೇ ಈ ಫೇಸ್‌ಬುಕ್‌ ಪುಟಗಳು ಸಾಲದು. ಆದರೂ ಅಜ್ಜನ ಇನ್ನೊಂದು ವಿಷಯ ಹೇಳಲೇ ಬೇಕು. ನಮ್ಮ ಅಮ್ಮನ ತಂದೆಯು ಕೋಡದ ಒಂದು ಪ್ರೀತಿಯ ಉಡುಗೊರೆ ಕೊಟ್ಟಿದ್ದಾರೆ. ಅದೇನೆಂದರೆ, ನಮ್ಮ ಅಮ್ಮನಿಗೆ ನಮ್ಮ ತಂದೆಯಗೆ ಒತ್ತಾಯ ಮಾಡಿ ಒಂದು ತೊಲೆ ಬಂಗಾರ ಮಾಡಿಸಿ ಕೊಟ್ಟಿದ್ದಾರೆ. ಇದೀಗ ತಾನೆ ನಮ್ಮ ಅಮ್ಮ ನನಗೆ‌ ಹೇಳಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆವು. ಅಜ್ಜನ ಹೆಸರು ಕೇಳಿದ ತಕ್ಷಣ ಮೊದಲು ನೆನಪಾಗುವುದು ಅವರು ನಾವು ಅವರ ಊರಲ್ಲಿ ಇದ್ದಾಗ ಉಪ್ಪನ್ನು ಮೊದಲು ಮಾಡಿ ನನ್ನ ಅಜ್ಜಿಯು ನಮಗೆ ಕೊಟ್ಟಿದ್ದಾರೆ. ಆ ಋಣವನ್ನು ನಾವು ಈ ಜನ್ಮದಲ್ಲಿ ತೀರಿಸಲಾಹಲಿಲ್ಲ. ಅವರು ನಮ್ಮ ಕುಟುಂಬವನ್ನು ಶೂರಪಾಲಿ ಊರಿಗೆ ಗೊತ್ತಾಗುವಂತೆ ಮಾಡಿದರು. 

ಅಜ್ಜ ಮತ್ತು ಅಜ್ಜಿಯು ನನಗೆ ಕಲಿಸಿದ ಪಾಠವೇನೆಂದರೇ "ಆಳಾಗಿ ದುಡಿದು ಅರಸನಾಗಿ ಉಣ್ಣುವುದು." ನನಗೆ ಅಜ್ಜನು ಅವರ ಹೊಲದಲ್ಲಿರುವ ತೆಂಗಿನ ಕಾಯಿಯನ್ನು ಹಿಡ ಹತ್ತಿ ತೆಗೆಯುವುದನ್ನು ಕಲಿಸಿದರು. ಅಜ್ಜ ಮತ್ತು ಅಜ್ಜಿಯು ನನ್ನ ಮಾವಂದಿರು ಮತ್ತು ಅತ್ತಿಗಳ ಸಹಾಯವಿಲ್ಲದೆ ಮಾಡಿರಲಾರರು. ಅವರು ಅಜ್ಜ ಮತ್ತು ಅಜ್ಜಿಯನ್ನು ಅನಾರೋಗ್ಯವಾದಾಗ ಹಣದ ಮುಖವನ್ನು ನೋಡದೇ, ಅವರ ಕೊನೆ ಉಸಿರು ಇರುವವರೆಗೂ ಅವರನ್ನು ಚೆನ್ನಾಗಿ ನೋಡಿಕೊಂಡರು. ಅವರು ಮಾಡಿದ ಆರಯಿಕೆಯ ಪುಣ್ಯ ಅವರಿಗೆ ಸಿಗಲೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಾನು ಊರಿಗೆ ಬಂದರೆ ಈ ಎರಡು ವರ್ಷದಲ್ಲಿ   ಮೋದಲು ನೆನೆಪಾಗುವುದು ನನ್ನ ತಂದೆಯು‌ ಶೂರಪಾಲಿಗೆ ಹೋಗುವುದು. ಸಂಬಂದಿಕರಲ್ಲಿ ಇಂತಹವರು ಸಿಗುವುದು ಅಪರೂಪ.  ಆದರೆ, ಇನ್ನೂ ನನ್ನ  ಶೂರಪಾಲಿ  ಅಜ್ಜ ಮತ್ತು ಅಜ್ಜಿಯ ನೆನಪು ಮಾತ್ರ. ಇವತ್ತಿಗೆ ನಮ್ಮ ಹಿರಿಯ ಸಂಬಂಧಿಕರ ಕೊಂಡಿ ಕಳಚಿದಂತಾಯಿತು. ಈ ಕೊನೆಯ ಸಾಲನ್ನು ಬರೆಯುವಾಗ ಯಾಕೋ ಕಣ್ಣುಗಳಲ್ಲಿ ನೀರು ದಳದಳನೇ ಸುರಿಯಲಾರಂಭಿಸಿದವು. ನಾನು ಈ ಮೇಲೆ ಬರೆದಿರುವ ವಿವರಣೆಯು ನನ್ನ ವೈಯಕ್ತಿಕ ಅನುಭವವಾಗಿದೆ. ಇನ್ನೊಮ್ಮೆ ಅಂತಹ ಹ್ಥದಯಗಳು ಹುಟ್ಟಿ ಬರಲೆಂದು ಬೇಡಿಕೊಳ್ಳುತ್ತೇನೆ. ಇದು ನನ್ನ ಬಿಚ್ಚಿದ ಜೋಳಿಗೆ ಅಷ್ಟೇ. 




 

Comments

  1. RIP sir������
    Don't be sad, if we are born one day we have to die also

    ReplyDelete
  2. RIP sir������
    Don't be sad, if we are born one day we have to die also

    ReplyDelete
  3. This comment has been removed by the author.

    ReplyDelete
  4. Thank you Shrujan for your condolence words.

    ReplyDelete

Post a Comment

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು