ಮನಸ್ಸನ್ನೇ ಮಾತಾಡಿಸಿದ 'ಮನಸ್ಸು ಮಾತಾಡಿತು!'
ಕರೋನಾ ಕಾರಣದಿಂದ ಶಾಲೆಗಳು ತೆರೆಯಬಾರದು ಎಂಬ ಆದೇಶದಿಂದ ಮುಂಜಾನೆ ಶಾಲೆಗೆ ಹೋಗುತ್ತೇವೆ. ವಿದ್ಯಾರ್ಥಿಗಳು ಚಂದನ ವಾಹಿನಿಯಲ್ಲಿನ ಪಾಠಗಳನ್ನು ವೀಕ್ಷಣೆ ಮಾಡಿ ಅದರಲ್ಲಿ ನೀಡುವ ಮನೆಗೆಲಸ ಮಾಡಿಕೊಂಡು ಬಂದು ಚೆಕ್ ಮಾಡಿಸಿಕೊಂಡು, ಶಾಲಾ ಕಾರ್ಯಾಲಯವನ್ನು ಸ್ವಚ್ಛಗೊಳಿಸಿ ಹೋಗುತ್ತಾರೆ. ಇದು ಒಂದು ಗಂಟೆಯಾಗಬಹುದು. ಉಳಿದ ಈ ವಾರದ ಸಮಯದಲ್ಲಿ ನಮ್ಮ ಶಾಲಾ ಗ್ರಂಥಾಲಯವನ್ನು ಸ್ವಚ್ಚ ಮಾಡುವಾಗ ಎ. ಆರ್. ಮಣಿಕಾಂತ್ ರವರು ಬರೆದಿರುವ "ಮನಸ್ಸು ಮಾತಾಡಿತು" ಪುಸ್ತಕವನ್ನು ಓದಿದೆನು.
ಎ. ಆರ್. ಮಣಿಕಾಂತರ ಈ ಪುಸ್ತಕದ ಪ್ರತಿಯೊಂದು ಲೇಖನಗಳು ಕೊನೆಯಲ್ಲಿ ಒಂದು ಆಶಾಭಾವವನ್ನು ಹುಟ್ಟಿಸುತ್ತವೆ. ಇದರೊಂದಿಗೆ ನಾನು ಹಲವಾರು ಮೌಲ್ಯಗಳನ್ನು ಕಲಿತುಕೊಡಿದ್ದೇನೆ. ನಾನು ಈ ಶಾಲೆಗೆ ಬಂದಾಗಿನಿಂದ ಪೂರ್ತಿಯಾಗಿ ಓದಿದ ಮೊದಲ ಪುಸ್ತಕವಾಗಿದೆ. ಈ ಕರೋನಾದಿಂದ ಶಾಲೆಯಲ್ಲಿ ಓದಿಗೆ ಹೆಚ್ಚಿನ ಸಮಯ ಸಿಗುತ್ತಿದೆ. ನಮ್ಮ ಶಾಲಾ ಗ್ರಂಥಾಲಯದಲ್ಲಿ ಇಂತಹ ಹೋಸ ಮತ್ತು ಹಳೆಯ ಪುಸ್ತಕಳಿವೆ.

Comments
Post a Comment