ದರ್ಶನ್: ಹಳ್ಳಿಯ ವಿಶೇಷ ಪ್ರತಿಭಾವಂತ

ದರ್ಶನ್: ಹಳ್ಳಿಯ ವಿಶೇಷ ಪ್ರತಿಭಾವಂತ


ನಾನು ಇಂದು ಶಾಲೆಗೆ ಹೋಗಿ ವಿದ್ಯಾರ್ಥಿಗಳು ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠದ ಮನೆಗೆಲಸವನ್ನು ಮಾಡಿಕೊಂಡು ಬಂದು ತೋರಿಸಿದರು. ನಂತರ ನಾನು ಮಕ್ಕಳನ್ನು ಸಂಖ್ಯಾ ಆಟವನ್ನು ಹೊರಗೆ ಕರೆದುಕೊಂಡು ಹೋದೆನು. 

ಆ ವಿದ್ಯಾರ್ಥಿಗಳು ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗಳಿದ್ದರು. ಅವರು One, two, three... ಹೇಳುವಾಗ, ವ್ಯಾಸನಕೆರೆ ಊರಿನ ಒಬ್ಬ ಬಡ ರೈತನ ಮಗ ದರ್ಶನ್ ಎಂಬ ಹುಡುಗ ಬಂದನು. ಒಮ್ಮೆ ನಮ್ಮ ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಹುಲಗಪ್ಪ ಸರ್ ಮತ್ತು ನಾನು ಮಕ್ಕಳ ಮನೆಗೆಗಳಿಗೆ ಭೇಟಿ ನೀಡುವಾಗ ಈ ದರ್ಶನನ ವಿಶೇಷ ಪ್ರತಿಭೆಯ ಬಗ್ಗೆ ಹೇಳಿದ್ದು ನೆನಪಾಯಿತು. ಆಗ ಅವನ ಪರಿಚಯ ಮಾಡಿಕೊಂಡೆವು. ಅವನು ಸ.ಹಿ.ಪ್ರಾ. ಶಾಲೆ, ಬ್ಯಾಲಕುಂದಿ ಯಲ್ಲಿ ಮೂರನೆಯ ತರಗತಿ  ಓದುತ್ತಿದ್ದಾನೆಂದು ಹೇಳಿದನು. ಅವನನ್ನು  ಪರಿಚಯ ಮಾಡತಾ ಪ್ರಶ್ನೆಗಳನ್ನು ಕೇಳಿದಾಗ ಅವನು ಕೊಟ್ಟ ಉತ್ತರಗಳನ್ನು ಅವನ ಧ್ವನಿಯಲ್ಲಿಯೇ ಕೇಳಿ. 

ದರ್ಶನನು ಗಣಿತದ ಮಗ್ಗಿಗಳನ್ನು ೨೦ ರವರೆಗೆ ನೇರವಾಗಿ ಮತ್ತು Reverse ಆಗಿ ಹೇಳುವುದನ್ನು ನೋಡಿ ನಮ್ಮ ವಿದ್ಯಾರ್ಥಿಗಳಿಗೆ ಸಂತೋಷವಾಯಿತು. ಅದರೊಂದಿಗೆ ಅವರಿಗೆ ತಾವು ಕೂಡಾ ಪ್ರಯತ್ನಿಸಬಹುದು ಎಂಬ ಮನೋಭಾವನೆ ಮೂಡಿಸುವಲ್ಲಿ ಆ ಮಧ್ಯಾಹ್ನದ ಆ ಸಮಯ ಮಕ್ಕಳೊಂದಿಗೆ ಕಳೆದಿದ್ದು ಖುಷಿ ನೀಡಿತು. ಆಗ ಆ ಊರಿನ ಕೆಲ ಬೇರೆ ಶಾಲೆಯ ಮಕ್ಕಳು ನೋಡಿ ಆಶ್ಚರ್ಯಚಕಿತರಾದರು. ಈ ಎಲ್ಲಾ ವಿಷಯಗಳನ್ನು ಉತ್ಪ್ರೇಕ್ಷೆಯಿಂದ ನಾನು ಹೇಳುತ್ತಿದ್ದೇನೆ ಎಂದು ಭಾವಿಸಬಾರದು. ಆ ಹುಡುಗ ಹೇಳುವ ಮಗ್ಗಿಗಳನ್ನು ಅವನಿಂದಲೇ ತಿಳಿದುಕೊಳ್ಳಲು ಪ್ರಯತ್ನ ಮಾಡೋಣ.


ನಿಂಗಪ್ಪ ಮಾಳಶೆಟ್ಟಿ

 ಸಹ ಶಿಕ್ಷಕರು,

ಸ.ಹಿ.ಪ್ರಾ.ಶಾಲೆ, ವ್ಯಾಸನಕೆರೆ

ದಿ: ೦೮.೧೨.೨೦೨೦


Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು