ವ್ಯಾಸನಕೆರೆ ಸ್ಥಳ ಮಹಿಮೆ

 ವ್ಯಾಸನಕೆರೆ ಸ್ಥಳ ಮಹಿಮೆ

ನಾನು ಜಿ.ಪಿ.ಟಿ. ಶಿಕ್ಷಕನಾಗಿ ಬಳ್ಳಾರಿಯಲ್ಲಿ ನಡೆದ ಕೌನ್ಸಿಲಿಂಗ್ ನಲ್ಲಿ  ಹೊಸಪೇಟೆ ತಾಲೂಕಿನ ಸಮೀಪದ ಹಳ್ಳಿಯ ಸ.ಹಿ.ಪ್ರಾ. ಶಾಲೆ, ವ್ಯಾಸನಕೆರೆ ಯನ್ನು ಆಯ್ಕೆ ಮಾಡಿಕೊಂಡೆನು. ಆ ಸಮಯದಿಂದ ಚಾಲನಾ ಆದೇಶವನ್ನು ತೆಗೆದುಕೊಳ್ಳುವವರೆಗೂ ವ್ಯಾಸನಕೆರೆ ಎಲ್ಲಿದೆ ಎಂಬುದ ಗೊತ್ತಿರಲಿಲ್ಲ. ಹಾಗೊ ಹೀಗೊ ಮಾಡಿ ವ್ಯಾಸನಕೆರೆ ಶಾಲೆ ನೋಡಿದೆ. 

ಸರಕಾರಿ ಶಿಕ್ಷಕರ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಜಮಖಂಡಿಯಲ್ಲಿ ನಮ್ಮ ಕ್ರೀಯಾ ಸಂಶೋಧನೆ ವಿಷಯದ ಉಪನ್ಯಾಸಕರಾಗಿಹಾಗೂ ಪ್ರಾಂಶುಪಾಲರಾಗಿದ್ದ ಶ್ರೀ. ಟಿ. ನಾರಾಯಣಗೌಡ ಸರ್ರು ಅದಲ್ಲದೇ, ಕಲಬುರ್ಗೀ ವಿಭಾಗದ ಜಂಟಿ ನಿರ್ದೇಶಕರಾಗಿದ್ದರು. ಮೊನ್ನೆ‌  ನಾನು ಫೇಸ್‌ಬುಕ್‌ ನಲ್ಲಿ ಕನಕದಾಸರ ಜಯಂತಿ ಆಚರಣೆಯ ಫೊಟೊ ಪೋಸ್ಟ ಮಾಡಿದಾಗ ಅವರು " ವ್ಯಾಸನಕೆರೆ ಸ್ಥಳ ಮಹಿಮೆ ಅಧ್ಯಯನ ಮಾಡಿದ್ದಿರಾ? ಹಾಗಿದ್ದರೆ ಹಂಚಿಕೊಳ್ಳಿ" ಎಂದಿದ್ದರು. ಹಾಗಾಗಿ ನಾನು ಇನ್ನೂ ತಿಳಿದುಕೊಳ್ಳುತ್ತಾ ಇದ್ದೇನೆಂದು ಪ್ರತಿಕ್ರಿಯೆ ನೀಡಿದ್ದೆ. ಆ ದಿನದಂದ ಆ ಊರಿನ ಮಹಿಮೆಯ ಬಗ್ಗೆ ತಿಳಿದುಕೊಳ್ಳವ ಆತುರ ಹೆಚ್ಚಾಯಿತು.

ನಮ್ಮ ಶಾಲೆಗೆ ಮೊನ್ನೆ ಕನ್ನಡ ಮಾಧ್ಯಮದ  ದ್ರುಢೀಕರಣ ಕರೆಸಿಕೊಂಡಿತು ಹೋಗಲು ಬಂದ ಆ ಊರಿನ ಹಿರಿಯ ಅಜ್ಜನವರು ಬಂದಿದ್ದರು. ಆಗ ಅವರನ್ನು ವ್ಯಾಸನಕೆರೆ ಊರಿಗೆ ಈ ಹೆಸರು ಹೇಗೆ ಬಂದಿತು ಎಂದು ಕೇಳಿದೆ. ಅವರು ೧೯೫೩ ರಲ್ಲಿ ಹುಟ್ಟಿದಂದಿನಿಂದ ಅವರಿಗೆ ಕೇಳಿ ತಿಳಿದು ಕೊಂಡಿದ್ದನ್ನು ಹೇಳಿದರು. 

 ಆ ಹಿರಿಯರು ಹೇಳದರು, "ಶ್ರೀ ಕೃಷ್ಣದೇವರಾಯನ ಗುರುಗಳಾದ ವ್ಯಾಸರಾಯರು ವ್ಯಾಸನಕೆರೆಯಿಂದ ೧೫ ಕಿ. ಮೀ. ದೂರದಲ್ಲಿರುವ ತಿಮಲಾಪುರದಲ್ಲಿರುವ ಶ್ರೀ  ಕೃಷ್ಣ ಮಠದಿಂದ ಮರಿಯಮ್ಮನ ಹಳ್ಳಯ ಮಾರ್ಗವಾಗಿ ಹೊಸಪೇಟೆಯ ತುಂಗಭದ್ರಾ ನದಿಯ ದಕ್ಷಿಣಕ್ಕೆ 'ಹಾಳುರ ಹನುಮಪ್ಪ' ದೇವಸ್ಥಾನವಿದೆ. ವ್ಯಾಸನಕೆರೆ ಎಂದು ಬರೆದಿರುವ ಲಿಪಿ ಕೂಡಾ ದುರಗಮ್ಮನ ಗುಡಿ ಹತ್ತಿರ ಇತ್ತು. ಅದನ್ನು ಕಳ್ಳರು ಹೊತ್ತೊಯ್ಯದರು. ಆ ದೇವಸ್ಥಾನಕ್ಕೆ ವ್ಯಾಸರಾಯರು ಬೇಟಿ ಮಾಡುತ್ತಿದ್ದರು. ಆ ಕಾರಣದಿಂದ ಇಲ್ಲಿರುವ ಈ ಸ್ಥಳಕ್ಕೆ ವ್ಯಾಸನಕೆರೆ ಎಂದು ಕರೆದರು." 

ವ್ಯಾಸನಕೆರೆಯ ಇನ್ನೊಬ್ಬರ ಪ್ರಕಾರ, "ಹೊಸಪೇಟೆ ತಾಲೂಕಿನ ಮುಂಚೆ ಮಲ್ಲಾಪುರ ಎಂಬ ತಾಲ್ಲೂಕಿನಲ್ಲಿ ೩೩ ಹಳ್ಳಿಗಳು ಇದ್ದುವಂತೆ. ಅವರು ಹೇಳುವಂತೆ ಕೆಲವು ವರ್ಷಗಳ ಹಿಂದೆ ತಮ್ಮ ಊರಿನ ಪಹಣೆಯಲ್ಲಿ ಮಲ್ಲಾಪುರವೆಂದು ಇರುತ್ತಿದ್ದವಂತೆ. ಆಗ ವ್ಯಾಸರಾಯರು ಈ ಪ್ರದೇಶವನ್ನು ಆಳುತ್ತಿದ್ದದುದರಿಂದ ಈ ಊರಿಗೆ ವ್ಯಾಸನಕೆರೆ ಎಂದು ಹೇಸರಾಯಿತಂತೆ." 

ನಾನು ಮೊದಲು ತಿಳಿದುಕೊಂಡ ಅಜ್ಜನು ಹೇಳಿದರು," ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ನಿಜವಾಗಿಯು ಮುತ್ತು ರತ್ನ ಮತ್ತು ಚಿನ್ನವನ್ನು‌ ಬೀದಿಗಳಲ್ಲಿ ಮಾರಾತಾ ಇದ್ದರು. ನನ್ನ ತಂಗಿಯ ಊರಿನಲ್ಲಿ ಇನ್ನೂ ಕೂಡಾ ಚಿನ್ನದ ನಾಣ್ಯವಿದೆ. ಈ ರಾಜನು ಹಲವಾರು ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಹಾಗಾಗಿ ಈ ಭಾಗವು ಸಂಪದ್ಭರಿತ ವಾಗಿದೆ." 

ನಾನು ಈ ವ್ಯಾಸನಕೆರೆ ಸ್ಥಳದ ಮಹಿಮೆಯ ಬಗ್ಗೆ ಅದ್ಯಯನ ಮಾಡುತ್ತಾ ಹೋದಾಗ ದೊರೆತ ಮಾಹಿತಿ ಇದಾಗಿದೆ. ಇದಲ್ಲದೇ ಇನ್ನೂ ನಿಮಗೆ ಈ ಊರಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾದರೇ ನನ್ನ Gmail: ninguvyasanakere@gmail.com ಗೆ ಹಂಚಿಕೊಳ್ಳಿರಿ. ಇಷ್ಟು ಅಧ್ಯಯನ ಮಾಡಿ ಮಾಹಿತಿಯನ್ನು ಕಲೆ ಹಾಕಲು ಕಾರಣರಾದವರು ಶ್ರೀ. ಟಿ. ನಾರಾಯಣಗೌಡ ಸರ್ . ಇವರು ಈ ಭಾಗದಲ್ಲಿ. ಸಾ. ಶಿ. ಇ. ಯಲ್ಲಿ ಕೆಲಸ ಮಾಡಿ ಈ ಸ್ಥಳಗಳ ಬಗ್ಗೆ ಆಸಕ್ತಿಯನ್ನು ಹೊಂದಿದವರಾಗಿದ್ದಾರೆ.  ಈ ಮಾಹಿತಿಯನ್ನು ನೀಡಿದ ಒಬ್ಬ ಹಿರಿಯರ ಸಂಭಾಷಣೆಯ ವಿಡಿಯೋ ಮತ್ತು ಫೋಟೊವನ್ನು ನೇರವಾಗಿ ಮಾಹಿತಿಯನ್ನು ಸಂಗ್ರಹಿಸಲು ನೆರವಾಗಿದ್ದಕ್ಕಾಗಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.


ಸಂಭಾಷಣೆಯ ವಿಡಿಯೋ: 


ನಿಂಗಪ್ಪ ಮಾಳಶೆಟ್ಟಿ                                                          ಸಹ ಶಿಕ್ಷಕರು,            ‌‌‌‌‌‌                                                ಸ.ಹಿ.ಪ್ರಾ. ಶಾಲೆ, ವ್ಯಾಸನಕೆರೆ.                                      Gmail: ninguvyasanakere@gmail.com




Comments

  1. ತುಂಬಾ ಒಳ್ಳೆ ಪ್ರಯತ್ನ ಸರ್, ಈ ಊರಿಗೆ ಹೇಗೆ ಈ ಹೆಸರು ಬಂತು ಅನ್ನೋ ಬಗ್ಗೆ ಇನ್ನೂ ಒಂದು ಪ್ರತೀತಿ ಹೀಗಿದೆ..... ವ್ಯಾಸರಾಯರು ಈ ಊರಿನ ಕೆರೆ ದಂಡೆಯಲ್ಲಿ ತಪಸ್ಸಿಗೆ ಕುಳಿತಿದ್ರಂತೆ ಹಾಗಾಗಿ ಈ ಕೆರೆಗೆ ವ್ಯಾಸನಕೆರೆ ಅಂತಾರೆ, ಈ ಕೆರೆ ದಂಡೇಲಿ ಈ ಊರು ಇರೋದ್ರಿಂದ ಈ ಊರನ್ನು ವ್ಯಾಸನಕೆರೆ ಅಂತೇಳಿ ಕರೀತಾ ಬಂದ್ರು ಅಂತ ಹೇಳ್ತಾರೆ ಅಂತ ನಾನು ಹೊಸದಾಗಿ ಈ ಊರಿಗೆ ಬಂದಾಗ ನಮ್ಮ husband ತಾತ ಹೇಳಿದ್ರು. ಇನ್ನೂ ವಿಚಾರಿಸಿ ಸರ್. ಹೆಚ್ಚಿನ ಮಾಹಿತಿ ಸಿಗಬಹುದು.
    All the best.

    ReplyDelete
  2. ನಿಮ್ಮ ಪ್ರತಿಕ್ರಿಯೆಕ್ಕಾಗಿ ತುಂಬಾ ಧನ್ಯವಾದಗಳು ಶ್ರೀಮತಿ ಕರಿಬಸಮ್ಮ ಮ್ಯಾಡಮ್ . ನಿಮ್ಮ ಈ ಹೆಚ್ಚಿನ‌ ಮಾಹಿತಿಯನ್ನು ಹಂಚಿಕೊಂಡದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಮ್ಯಾಡಮ್.

    ReplyDelete
  3. ಸೂಪರ್ ಸರ್

    ReplyDelete

Post a Comment

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು