ಸ್ನೇಹಿತನ ನೆನಪು

 ನಾವು ಈ ಜಗತ್ತಿನಲ್ಲಿ ಎಲ್ಲವನ್ನೂ ಪಡೆದುಕೊಳ್ಳಬಹುದು. ಆದರೆ, ಉತ್ತಮ ಸ್ನೇಹಿತನನ್ನು ಪಡೆದುಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ, ನಮ್ಮ ಜೀವನದಲ್ಲಿ ಎಷ್ಟೊ ಸ್ನೇಹಿತರು ಬಂದು ಹೋಗುತ್ತಾರೆ. ನೆನಪಿನಲ್ಲಿ ಉಳಿಯುವವರು ಕೆಲವೇ ಸ್ನೇಹಿತರು. ಅವರು ನಮಗೆ ಕಷ್ಟ ಮತ್ತು ಸುಖಗಳಲ್ಲಿ ಭಾಗಿಯಾಗುತ್ತಾರೆ. ನಾನು ಯಾಕೆ ಇವತ್ತು ಸ್ನೇಹಿತನ ಬಗ್ಗೆ ಹೇಳುತ್ತಿದ್ದೇನೇ ಗೊತ್ತಾ?

ಶ್ರಾವಣ ಮಾಸದ ಸೋಮವಾರ  ಅಂದು ನಮ್ಮ ಮನೆಯಲ್ಲಿ ಎಷ್ಟೋ ವರ್ಷಗಳ ಹಿಂದೆ ತೀರಿಕೊಂಡ ಎತ್ತಿಗೆ ಪ್ರತಿವರ್ಷ ಅಭಿಷೇಕ್ ಮಾಡುವುದು ರೂಢಿಯಾಗಿದೆ. ಅದು ನಮ್ಮ ಅಜ್ಜ ಮತ್ತು ನನ್ನ ತಂದೆಯವರು ಇಟ್ಟುಕೊಂಡು ಬಂದಿರುವ ನಂಬಿಕೆಯಾಗಿದೆ. ಆ ಎತ್ತಿನ ಸಮಾಧಿಯ ಪಕ್ಕ ಒಂದು ಮೂರು ದಳದ ಪತ್ರಿಯ ಗಿಡವಿದೆ. ಇವತ್ತು ನಮ್ಮ ಕುಟುಂಬದ ಎಲ್ಲ ಸದಸ್ಯರು ಪೂಜಾ ಕಾರ್ಯಕ್ರಮ ನೆರವೇರಿಸಿದ ನಂತರ ನೈವೇದ್ಯದ ನಂತರ ಅದನ್ನು ದೇವರ ಮುಂದೆ ಭೂಮಿಯ ಮೇಲೆ ಇಡಲಾಯಿತು. ಆಗ  ಕುಂತಲ ಪ್ರೌಢಶಾಲೆಯಲ್ಲಿ  ಹತ್ತನೆಯ ತರಗತಿಯ  ನನ್ನ ಸ್ನೇಹಿತನ ನೆನಪಾಯಿತು. ಅವನು ಮನೆಯಲ್ಲಿ ಇರುವೆಗಳು ಹೊರಡತ್ತಿರುವಾಗ ಸಕ್ಕರೆಯನ್ನು ನೆಲದ ಮೇಲೆ ಹಾಕುತ್ತಿದ್ದ. ಒಂದು ದಿನ ಅವನ ಮನೆಯಲ್ಲಿ ಬೆಕ್ಕು ಸತ್ತಾಗ ಅದನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡುತ್ತಿದ್ದಾಗ ನಾನು ರವಿವಾರ ರಜೆಯ ಕಾರಣದಿಂದ ಅವನ ಮನೆಗೆ ಹೊಗಿದ್ದೆ. ಆಗ ಅವನ ಅಮ್ಮ ನನಗೆ ನಿನ್ನ ಸತ್ತ ಬೆಕ್ಕಿನ ಸಮಾಧಿ ಮಾಡುತ್ತಿದ್ದಾನೆ ಅಂತ ಹೇಳಿದರು. ಆಗ ಅವನ ಹತ್ತಿರ ಹೋಗಿ ನೋಡಿದೆ. ಅವನು ಬೆಕ್ಕಿನ ಸಮಾಧಿ ಮೇಲೆ ಹೂವಿನ ಹಾರ ಹಾಕಿದ್ದು ನೆನಪು ನನಗೆ. 

ಆ ಒಂದು ಗುರುವಾರ ಅವನ ಪಾಲಿಗೆ ಕರಾಳ ದಿನವಾಗಿತ್ತು. ಆಗ ಅವನು ಮತ್ತು ನಾನಾ ಪಿ.ಯು.ಸಿ. ಎರಡನೆಯ ವರ್ಷದಲ್ಲಿ ಓದುತ್ತಿದ್ದೆವು. ನಾನು ಇದ್ದ ಹಾಸ್ಟೆಲ್ ಪಕ್ಕದಲ್ಲಿ ಕಿನಾಲ್ ಕೆಲಸ ನಡೆದಾಗ ಟ್ರ್ಯಾಕ್ಟರ ಅವನ ಮೇಲೆ ಹಾಯಿದು ತೀರಿಕೊಂಡನು. ಇದರ ಸುದ್ದಿ ತಿಳಿದು ಅವನ ತಾಯಿಯು ಮಗ ದುಡಿದು ಕೂಡಿಟ್ಟ ಹಣವನ್ನು ಮಗನನ್ನು ಆಸ್ಪತ್ರೆಗೆ ಸೇರಿಸಲು ತಂದಳು ಆ ತಾಯಿ. ನೋಡಿದರೇ ಮಗನ ಜೀವ ಹೋಗಿ ಬಿಟ್ಟಿತ್ತು. ನನಗೆ ಎರಡನೇ ದಿನದ ರಾತ್ರಿ ವಿಷಯ ತಿಳಿದು ಹಾಸಿಗೆ ಒದ್ದೆಯಾಗುವಂತೆ ಅತ್ತು ಬಿಟ್ಟೆ. ಮರು ದಿನ ಅವನ ಮನೆಗೆ ಹೋದಾಗ ಅವನಿಗೆ ನಾನು ಕೊಟ್ಟ ಪೆನ್ ನ್ನು ಇಟ್ಟದ್ದು ಮತ್ತು ನನ್ನ ಮೊಬೈಲ್‌ ನಂಬರನ್ನು ಕ್ಯಾಲೆಂಡರ್ ಮೇಲೆ ಬರೆದು ಬಿಟ್ಟಿದ್ದ. ಅದನ್ನು ನೋಡಿ ಈ ಜೀವನ ಇಷ್ಟೇ ಇರುವವರೆಗೆ ಅಷ್ಟೇ. ಈಗ ನಾನು ಏನಾದರೂ ಕೊಡಲು ಸಿಧ್ಧನಿದ್ದೆನೆ. ಆದರೆ, ಅವನಿಲ್ಲ. ಅವನಿದ್ದಾಗ ನನಗೆ ಕೊಡಲು ಸಾಧ್ಯವಾದದ್ದು ಒಂದು ಪೆನ್ನು ಮಾತ್ರ.

ಅಂತಹ ಮಾನವೀಯ ಅಂತಃಕರಣ ಹೋಂದಿದ ನನ್ನ ಗೆಳೆಯನಿಗೆ ಹಾಗೆ ಆಗಬಾರದಿತ್ತು. ಅವನೂ ಕೂಡಾ ಇದ್ದರೆ ನನ್ನ ಹಾಗೆ ಇರಬಹುದಾಗಿತ್ತು. ಇವತ್ತು ಇಂತಹ ಸ್ನೇಹಿತನನ್ನು ಪಡೆದಿದ್ದೆ ನನ್ನ ಪುಣ್ಯ. ಇಬ್ಬರು ಕೂಡಿ ಆಟ ಆಡಿದ್ದು,  ಊಟ ಮಾಡಿದ್ದು, ಪಕ್ಕಾ ನೋಟ್ ಬುಕ್ಗಗಳನ್ನು ಎಕ್ಸೆಂಜ್ ಮಾಡಿ ಬರೆದಿದ್ದು. ಏಕೆಂದರೆ, ಇಬ್ಬರ ಬರವಣಿಗೆ ರೀತಿ ಒಂದೇ ಆಗಿತ್ತು. ಇವೆಲ್ಲ ನೆನಪು ಇವತ್ತು ನೆನಪಾಗಿ ಉಳಿದಿವೆ.  ನೀನಿಲ್ಲದಿದ್ದರೂ ನಿನ್ನ ನೆನಪು ಸದಾ ನೀ ಮಾಡಿ ತೋರಿಸಿದ ಮಾನವೀಯ ಅಂತಃಕರಣದಲ್ಲಿರುತ್ತದೆ.

ಇಂತಿ ನಿನ್ನ ಸ್ನೇಹಿತ,

೧೦.೦೮.೨೦೨೦

Comments

  1. Mind blowing ...life is too short so keep helping others

    ReplyDelete
  2. Mind blowing.... sometimes somebody need help then do it if not you definitely regred it ...

    ReplyDelete

Post a Comment

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು