ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವ್ಯಾಸನಕೆರೆ, ಹೊಸಪೇಟೆ, ವಿಜಯನಗರ - 583222
Curriculum and Inclusive Classrooms_ Ka-1/NISHTHA
Get link
Facebook
X
Pinterest
Email
Other Apps
I have completed NISHTHA Course Ka-1 successfully on 4th Nov. 2020. It's the first module out of three modules in 15 days in the month of November, 2020.
ನೈತಿಕ ಮೌಲ್ಯ ಆಚರಣೆಯಲ್ಲಿರಲಿ . ನೈತಿಕ ಮೌಲ್ಯಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ (ವಿಶ್ಲೇಷಣೆ, ಅಭಿಮತ, ಪ್ರಜಾವಾಣಿ) ಪ್ರಕಟವಾದ ಅರವಿಂದ ಚೊಕ್ಕಾಡಿಯವರ ಲೇಖನ 'ಮೌಲಿಕ ಶಿಕ್ಷಣ : ಆಲೋಚನಾ ಕ್ರಮ' ಬಹಳ ಪ್ರಸ್ತುತವಾದ ಲೇಖನವಾಗಿ ಮೂಡಿಬಂದಿದೆ. ನಾನು ಒಬ್ಬ ಶಿಕ್ಷಕನಾಗಿ ಹಲವಾರು ಬಾರಿ ನನ್ನೊಳಗೆ ನಾನೇ ಹಲವಾರು ಸಲ ಈ ವಿಚಾರವಾಗಿ ಆತ್ಮ ವಿಮರ್ಶೆ ಮಾಡಿಕೊಂಡಿದ್ದೆನೆ. ಶಿಕ್ಷಕರಾಗಿ ನಾವು ಮಕ್ಕಳೊಂದಿಗೆ ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡಾಗ, ಮಕ್ಕಳು ಆ ವಿಷಯಗಳನ್ನು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಬಳಕೆಯಲ್ಲಿವೆ ಎಂಬುದನ್ನು ವಿಚಾರ ಮಾಡುತ್ತಾರೆ. ಒಂದು ವೇಳೆ ಶಾಲೆಯಲ್ಲಿ ಬಿತ್ತಿದ ನೈತಿಕ ಮೌಲ್ಯಗಳು ತಾನು ವಾಸಿಸುವ ಪರಿಸರದಲ್ಲಿ ಇಲ್ಲವೆಂದಾದರೇ ಶಾಲೆಯಲ್ಲಿನ ನೈತಿಕ ಮೌಲ್ಯಗಳು ಅಪ್ರಸ್ತುತ ಎನಿಸುತ್ತವೆ. ಆದರೂ, ನಮ್ಮ ಪ್ರಯತ್ನವನ್ನು ಮಾಡುತ್ತಿರಬೇಕು. ಇವತ್ತಿನ ಪ್ರಯತ್ನ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ. ಹಾಗಾಗಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರು, ಸಮುದಾಯ ಮತ್ತು ಶಾಲೆಗಳಿಂದ ಆಗಬೇಕಾದ ಅತೀ ಅವಶ್ಯಕವಾದ ಜವಾಬ್ದಾರಿಯಾಗಿದೆ. - ನಿಂಗಪ್ಪ ಮಾಳಶೆಟ್ಟಿ, ಕಾಜಿಬೀಳಗಿ, ಜಮಖಂಡಿ
ನನ್ನ ಅಜ್ಜ ನನ್ನ ಸಂತೋಷದ ಮೊದಲ ಹಿತೈಷಿ ಎಂದರೆ ತಪ್ಪಾಗಲಾರದು. ಏಕೆಂದರೆ, ನಾನು ೨೯ ವರ್ಷದಲ್ಲಿ ನನ್ನ ಅಜ್ಜನೊಂದಿಗೆ ೮ ವರ್ಷಗಳ ಕಾಲ ಬಹಳ ಸಂತೋಷದಾಯಕ ಮುತ್ತು ಉಲ್ಲಾಸದಾಯಕವಾಗಿ ಕಳೆದಿದ್ದೇನೆ. ನನ್ನ ಅಜ್ಜ ನನ್ನ ಬಗ್ಗೆ ಎಲ್ಲರ ಮುಂದೆ ಹೇಳುವುದೆಂದರೇ ಅವನಿಗೆ ಬಹಳ ಖುಷಿ. ಅವನು ಯಾರಿಗೂ ನೋವನ್ನು ಉಂಟು ಮಾಡದೆ, ಬೇರೆಯವರನ್ನು ಹಾಳು ಮಾಡದೆ, ತನ್ನಲ್ಲಿದ್ದಿದ್ದನ್ನು ಬೇರೆಯವರಿಗೆ ದಾನ ಮಾಡಿದ ನಮ್ಮ ಮನೆಯ ಹಿರಿಯ ತಲೆಮಾರಿನ ವ್ಯಕ್ತಿಯಾಗಿದ್ದರು. ನಮ್ಮನ್ನು ದೈಹಿಕವಾಗಿ ನಮ್ಮನ್ನು ಅಗಲಿದರೂ ಅಜ್ಜನಿಂದ ಕೇಳಿದ, ಕಲಿತ ಸುಗ್ಗಿ ಹಾಡು, ಸಂದರ್ಬಾನುಸಾರ ಹೋಳುತ್ತಿದ್ದ ಒಡಪುಗಳು, ಆ ಬೆಳದಿಂಗಳ ರಾತ್ರಿಯಲ್ಲಿ ನನಗೆ ಹೇಳುತ್ತಿದ್ದ ಹಲವಾರು ಕಥೆಗಳನ್ನು ನನ್ನ ಬೋಧನೆಯ ಸಮಯದಲ್ಲಿ ಹೇಳಿದ್ದುಂಟು. ನಾನು ಅಜ್ಜನಿಗೆ ಮೊದಲ ಮೊಮ್ಮಗನಾದ್ದರಿಂದ ನಾನು ಹುಟ್ಡಿದ ಎರಡು ವರ್ಷದ ನಂತರ ಅವನು ನನ್ನನ್ನು ಅಮ್ಮನೊಂದಿಗೆ ಕಳಿಸಿರಲಿಲ್ಲ. ಆಗ ನನಗೆ ದಿನಾಲು ಒಂದು ಬಿಸ್ಕೇಟ್ ತಂದು ಆ ಹಳೆಯ ಕಪಾಟಿನಲ್ಲಿ ಇಟ್ಡು ನಾ ಕೇಳಿದಾಗಗಲೆಲ್ಲ ಕೊಡುತ್ತಿದ್ದರು. ನನಗೆ ತಾಯಿಗಿಂತ ಹೆಚ್ಚು ಮಮತೆ ತೋರಿದ ಅಜ್ಜ ಎಂದಿಗೂ ನನಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ನಾನು ಮತ್ತು ನನ್ನ ಅಜ್ಜನ ಮದ್ಯೆ ಇರುವ ಬಹಳ ಸಾಮ್ಯತೆಯ ವಿಷಯ. ಅದೇನೆಂದರೆ, ಅವನಿಗೂ ಬಜಿ(ಮಿರ್ಚಿ) ಎಂದರೆ ಬಹಳ ಇಷ್ಟ , ನನಗೂ ಬಜಿ ಎಂದರೆ ಪಂಚ ಪ್ರಾಣ. ನಾನು ಅಧ್ಯಯನ ಮಾಡಲು ತುಂಗಳ, ಜಮಖಂಡಿ, ಬ...
Comments
Post a Comment