ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು
ನನ್ನ ಅಜ್ಜ ನನ್ನ ಸಂತೋಷದ ಮೊದಲ ಹಿತೈಷಿ ಎಂದರೆ ತಪ್ಪಾಗಲಾರದು. ಏಕೆಂದರೆ, ನಾನು ೨೯ ವರ್ಷದಲ್ಲಿ ನನ್ನ ಅಜ್ಜನೊಂದಿಗೆ ೮ ವರ್ಷಗಳ ಕಾಲ ಬಹಳ ಸಂತೋಷದಾಯಕ ಮುತ್ತು ಉಲ್ಲಾಸದಾಯಕವಾಗಿ ಕಳೆದಿದ್ದೇನೆ. ನನ್ನ ಅಜ್ಜ ನನ್ನ ಬಗ್ಗೆ ಎಲ್ಲರ ಮುಂದೆ ಹೇಳುವುದೆಂದರೇ ಅವನಿಗೆ ಬಹಳ ಖುಷಿ. ಅವನು ಯಾರಿಗೂ ನೋವನ್ನು ಉಂಟು ಮಾಡದೆ, ಬೇರೆಯವರನ್ನು ಹಾಳು ಮಾಡದೆ, ತನ್ನಲ್ಲಿದ್ದಿದ್ದನ್ನು ಬೇರೆಯವರಿಗೆ ದಾನ ಮಾಡಿದ ನಮ್ಮ ಮನೆಯ ಹಿರಿಯ ತಲೆಮಾರಿನ ವ್ಯಕ್ತಿಯಾಗಿದ್ದರು. ನಮ್ಮನ್ನು ದೈಹಿಕವಾಗಿ ನಮ್ಮನ್ನು ಅಗಲಿದರೂ ಅಜ್ಜನಿಂದ ಕೇಳಿದ, ಕಲಿತ ಸುಗ್ಗಿ ಹಾಡು, ಸಂದರ್ಬಾನುಸಾರ ಹೋಳುತ್ತಿದ್ದ ಒಡಪುಗಳು, ಆ ಬೆಳದಿಂಗಳ ರಾತ್ರಿಯಲ್ಲಿ ನನಗೆ ಹೇಳುತ್ತಿದ್ದ ಹಲವಾರು ಕಥೆಗಳನ್ನು ನನ್ನ ಬೋಧನೆಯ ಸಮಯದಲ್ಲಿ ಹೇಳಿದ್ದುಂಟು. ನಾನು ಅಜ್ಜನಿಗೆ ಮೊದಲ ಮೊಮ್ಮಗನಾದ್ದರಿಂದ ನಾನು ಹುಟ್ಡಿದ ಎರಡು ವರ್ಷದ ನಂತರ ಅವನು ನನ್ನನ್ನು ಅಮ್ಮನೊಂದಿಗೆ ಕಳಿಸಿರಲಿಲ್ಲ. ಆಗ ನನಗೆ ದಿನಾಲು ಒಂದು ಬಿಸ್ಕೇಟ್ ತಂದು ಆ ಹಳೆಯ ಕಪಾಟಿನಲ್ಲಿ ಇಟ್ಡು ನಾ ಕೇಳಿದಾಗಗಲೆಲ್ಲ ಕೊಡುತ್ತಿದ್ದರು. ನನಗೆ ತಾಯಿಗಿಂತ ಹೆಚ್ಚು ಮಮತೆ ತೋರಿದ ಅಜ್ಜ ಎಂದಿಗೂ ನನಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ.
ನಾನು ಮತ್ತು ನನ್ನ ಅಜ್ಜನ ಮದ್ಯೆ ಇರುವ ಬಹಳ ಸಾಮ್ಯತೆಯ ವಿಷಯ. ಅದೇನೆಂದರೆ, ಅವನಿಗೂ ಬಜಿ(ಮಿರ್ಚಿ) ಎಂದರೆ ಬಹಳ ಇಷ್ಟ , ನನಗೂ ಬಜಿ ಎಂದರೆ ಪಂಚ ಪ್ರಾಣ. ನಾನು ಅಧ್ಯಯನ ಮಾಡಲು ತುಂಗಳ, ಜಮಖಂಡಿ, ಬಾಗಲಕೋಟ, ಬೆಳಗಾವಿ ಮತ್ತು ಉದ್ಯೋಗ ಮಾಡಲು ಹೊಸಪೇಟೆಗೆ ಹೋದಾಗ ನನ್ನ ಅಜ್ಜ ನನಗೆ ಯಾವಾಗಲೂಹೇಳುತ್ತಿದ್ದದ್ದು," ನೀನು ಊಟಾ ಸರಿಯಾಗಿ ಮಾಡು, ಹಣ ಎಷ್ಟ ಹೋದರೂ ಚಿಂತೆಯಿಲ್ಲ, ನಮ್ಮ ಅಪ್ಪ ಯಾರ ಕಡೆಯಿಂದ ತಂದು ಕೊಡತಾನೆ." ಅವನ ಒಂದು ಉತ್ತಮ ಗುಣ ಎಂದರೇ, ಯಾರಾದರೂ ಅವನಿಗೆ ಉಪಕಾರ ಮಾಡಿದರೆ ಎಂದೂ ಮರೆಯುವಂತಹ ವ್ಯಕ್ತಿ ಆಗಿರಲಿಲ್ಲ. ಉದಾಹರಣೆಗೆ ಹೇಳುವುದಾದರೆ, ನಾನು ಜಮಖಂಡಿಗೆ ಪಿಯುಸಿ ಓದಲು ಹೋದಾಗ ನನಗೆ ಕಂಬಿ ಸರ್ ಎರಡು ಜೊತೆ ಬಟ್ಟೆ ಕೊಡಿಸಿದ್ದನ್ನು ಯಾರೆ ನಮ್ಮ ಮನೆಗೆ ಬಂದರೆ ಅನೆನಪಿಸಿದ್ದುತ್ತಿದ್ದರು. ನನಗೆ ಅಧ್ಯಯನಕ್ಕೆ ಅವಶ್ಯಕತೆ ಅನಿಸಿದಾಗ ಅಡಳ್ಳಿ ಸರ್ ಹಣ ಕೊಟ್ಟಿದ್ದನ್ನು ನನ್ನ ಸಣ್ಣ ಅಜ್ಜಿಯ ಮಂದೆ ಹೇಳುತ್ತಾ ಇದ್ದರು. ಅದೂ ಅಲ್ಲದೇ, "ನೀನು ಮಲಕವ್ವನ ಮಗ ನರಸಿಂಹನ ಹಾಗೆ ಮಾಸ್ತರ ಆಗು ಮತ್ತು ಮನೆ ಸಮೀಪ ಇರಬೇಕು." ಅವನು ಯಾವಾಗಲೂ ಬೇರೆಯವರೊಂದಿಗೆ ನೆನಪು ಮಾಡುವ ಕುಟುಂಬ ಶೂರಪಾಲಿಯ ಅಜ್ಜ, ಅಜ್ಜಿ, ಅತ್ತೆ ಮತ್ತು ಮಾವಂದಿರು ಮತ್ತು ಅವರು ಮಾಡಿದ ಸಹಾಯವನ್ನು ಎಂದು ಮರಿಯಂಗಿಲ್ಲ. ಅವರು ಯಾವಾಗಲೂ ನೆನಪಿಸಿದ್ದು ನನ್ನ ಅಜ್ಕ ಬೇರೆಯವರು ಉಪಕಾರ ಮಾಡಿದರೆ ಅದನ್ನು ಹೇಗೆ ತೀರಿಸೋದು ಅಂತ ಕೇಳುತ್ತಿದ್ದ ವ್ಯಕ್ತಿಯಾಗಿ ನನ್ನಂದಿಗೆ ಇದ್ದದ್ದು ನನಗೆ ಹೆಮ್ಮೆ.
ಅಜ್ಜ ಮತ್ತು ನನ್ನ ತಂದೆಯವರ ಬಾಂಧವ್ಯವನ್ನು ಎಷ್ಟೂ ಹೇಳಿದರು ಮುಗಿಯೋದಿಲ್ಲ. ಅಜ್ಜನು ೮೬ ವರ್ಷ ಆಗುವವರೆಗೂ ನಮ್ಮ ತಂದೆಯವರಿಗೆ ಸಗಣಿ ಬಳಿಯಲು ಹಚ್ಚಿರಲಿಲ್ಲ. ಅವನು ಇರುವವರೆಗೆ ನಮ್ಮನ್ನು ಎಂದು ಬಹಳ ಕೆಲಸಕ್ಕೆ ತೊಡಗಿಸುವ ಬದಲಾಗಿ ಓದಿಗೆ ಹೆಚ್ಚು ಮಹತ್ವ ಕೊಟ್ಟರು. ಆ ಕಾರಣದಿಂದ ನಾನು ಒಳ್ಳೆಯ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶ ಒದಗಿ ಬಂತು ಎಂದು ಹೇಳಿದರೆ ತಪ್ಪಾಗಲಾರದು. ನನ್ನ ತಂದೆಯವರು ಅಜ್ಜನ್ನು ಇರುವವರೆಗೆ ಹೂವಿನ ಹಾಗೆ ನೋಡಿಕೊಂಡರು.
ನನ್ನ ಅಜ್ಜ ಜಾತಿ, ಕುಲ ಮತ್ತು ಗೋತ್ರ ಎನ್ನದೇ ಎಲ್ಲರನ್ನು ಪ್ರೀತಿಯಿಂದ ಕಂಡು ಅವರ ಜೊತೆಗೆ ಅವಿನಾಭಾವ ಸಂಬಂಧವಿತ್ತು. ಅಜ್ಜ ಬಹಳ ಮಗ್ಧನಾಗಿದ್ದರಿಂದ ಬೇರೆಯವರು ಅದನ್ನು ದುರುಪಯೋಗ ಪಡಿಸಿಕೊಂಡರು. ಬೇರೆಯವರು ಹೇಳವ ಹಾಗೆ, ನನ್ನ ಅಜ್ಜನ ಶ್ರೀಮಂತ ಕುಟುಂಬಲ್ಲಿ ಏನೂ ಕೊರತೆ ಇರಲಿಲ್ಲ. ಅದು ಹೇಗಾಯಿತು, ಏನಾಯಿತು ಎಂದು ಗೊತ್ತಾಗದಂತೆ ಹಿಂದೆ ಹೋಗಿ ಬಿಟ್ಟಿತು. ನಮ್ಮ ಹೋಲದಲ್ಲಿ ದಿನಾಲು ಕೂಲಿ ಆಳುಗಳನ್ನು ಹಚ್ಚತ್ತಿದ್ದರಂತೆ, ಆದರೆ, ಮುಂದೆ ಒಂದು ದಿನ ಅಜ್ಜನ ಒಬ್ಬನೇ ಒಬ್ಬ ಮಗ ಬೇರೆಯವ ಹೊಲದಲ್ಲಿ ಕೂಲಿ ಮಾಡುವ ಸ್ಥಿತಿಗೆ ಬಂದು ಬಿಟ್ಟಿತು. ಅಜ್ಜನಂತೆ ನಮ್ಮ ಅಪ್ಪನೂ ಕೂಡಾ ಅದೆ ತೆರನಾಗಿ ಇದ್ಸಾರೆ. ಏನೆ ಆದರೂ ತನಗೆ ನೋವಿದ್ದರೂ ಬೇರೆಯವರಿಗೆ ಬಹಳ ದಿನ ನಮ್ಮೊಂದಿಗೆ ಸಂತೋಷದಿಂದ ಇದ್ದು ನಕ್ಕು ನಲಿದು ನಮ್ಮನ್ನು ದೈಹಿಕವಾಗಿ ಅಗಲಿದರೂ. ಅಜ್ಜನ ಒಂದು ಮಾತು ನನ್ನ ತಂದೆಯವರಿಗೆ ಮನಸ್ಸಿಗೆ ನಾಟಿತ್ತು. ಅದೇನೆಂದರೆ, ಅಜ್ಜನು ಅನಾರೋಗ್ಯದಿಂದ ಬಳುತ್ತಿದ್ದಾಗ ಹೇಳಿದ ಮಾತು, "ನಾನು ನೀವು ಮಾಡುವ ಈ ಸೇವೆಯನ್ನು ಹೇಗೆ ತೀರಿಸಲಿ, ನಮಗೆ ಬಹಳ ತೊಂದರೆ ಕೊಡುದಾಯಿತು." ಇಂತಹ ಮಾತುಗಳಿಂದ ನಾನು ಅವನೊಂದಿಗಿನ ಆ ದಿನಗಳು ನನಗೆ ಅವಿಸ್ಮರಣೀಯವಾದವುಗಳು.
ಇಂತಿ ನಿನ್ನ ಮೊಮ್ಮಗ,
ನಿಂಗಪ್ಪ
ದಿನಾಂಕ: 02-09-2021

😔
ReplyDeleteI miss you Grandpa👴 😔
ReplyDeleteNothing any bodies love is equal to grandappa's love 💕
ReplyDeleteSo sad anna no one is equal to his love
ReplyDeleteI think he always with you in form of his work, suggestions, memories 😊
ReplyDeleteಬೆಂಕಿ ಬಿಡೋ ಅಣ್ಣ ನೀನು...
ReplyDeleteಸುಪರ್ ಸರ್.....
ReplyDeleteVery good grandfather, I was also in contact with him at one time, he is a good genuine person.
ReplyDelete👌👌👌
ReplyDeleteಹೃದಯಸ್ಪರ್ಶಿ🌸
ReplyDelete