ಸಹ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವ್ಯಾಸನಕೆರೆ, ಹೊಸಪೇಟೆ, ವಿಜಯನಗರ - 583222
Katha Sangama by Puttanna Kanagal
Get link
Facebook
X
Pinterest
Email
Other Apps
This film is based on collection of three stories and first one is based on 'Hangu' by Giraddi Govindarajaru,which is about ethics of teaching profession.
ನೈತಿಕ ಮೌಲ್ಯ ಆಚರಣೆಯಲ್ಲಿರಲಿ . ನೈತಿಕ ಮೌಲ್ಯಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ (ವಿಶ್ಲೇಷಣೆ, ಅಭಿಮತ, ಪ್ರಜಾವಾಣಿ) ಪ್ರಕಟವಾದ ಅರವಿಂದ ಚೊಕ್ಕಾಡಿಯವರ ಲೇಖನ 'ಮೌಲಿಕ ಶಿಕ್ಷಣ : ಆಲೋಚನಾ ಕ್ರಮ' ಬಹಳ ಪ್ರಸ್ತುತವಾದ ಲೇಖನವಾಗಿ ಮೂಡಿಬಂದಿದೆ. ನಾನು ಒಬ್ಬ ಶಿಕ್ಷಕನಾಗಿ ಹಲವಾರು ಬಾರಿ ನನ್ನೊಳಗೆ ನಾನೇ ಹಲವಾರು ಸಲ ಈ ವಿಚಾರವಾಗಿ ಆತ್ಮ ವಿಮರ್ಶೆ ಮಾಡಿಕೊಂಡಿದ್ದೆನೆ. ಶಿಕ್ಷಕರಾಗಿ ನಾವು ಮಕ್ಕಳೊಂದಿಗೆ ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡಾಗ, ಮಕ್ಕಳು ಆ ವಿಷಯಗಳನ್ನು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಬಳಕೆಯಲ್ಲಿವೆ ಎಂಬುದನ್ನು ವಿಚಾರ ಮಾಡುತ್ತಾರೆ. ಒಂದು ವೇಳೆ ಶಾಲೆಯಲ್ಲಿ ಬಿತ್ತಿದ ನೈತಿಕ ಮೌಲ್ಯಗಳು ತಾನು ವಾಸಿಸುವ ಪರಿಸರದಲ್ಲಿ ಇಲ್ಲವೆಂದಾದರೇ ಶಾಲೆಯಲ್ಲಿನ ನೈತಿಕ ಮೌಲ್ಯಗಳು ಅಪ್ರಸ್ತುತ ಎನಿಸುತ್ತವೆ. ಆದರೂ, ನಮ್ಮ ಪ್ರಯತ್ನವನ್ನು ಮಾಡುತ್ತಿರಬೇಕು. ಇವತ್ತಿನ ಪ್ರಯತ್ನ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ. ಹಾಗಾಗಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರು, ಸಮುದಾಯ ಮತ್ತು ಶಾಲೆಗಳಿಂದ ಆಗಬೇಕಾದ ಅತೀ ಅವಶ್ಯಕವಾದ ಜವಾಬ್ದಾರಿಯಾಗಿದೆ. - ನಿಂಗಪ್ಪ ಮಾಳಶೆಟ್ಟಿ, ಕಾಜಿಬೀಳಗಿ, ಜಮಖಂಡಿ
ನಾನರಿತ ವಿಶ್ವಮಾನವ : ಬಸವಣ್ಣ ಬಸವಣ್ಣನವರು ಈ ಜಗತ್ತು ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಭಕ್ತಿ ಬಂಢಾರಿ, ಆದರ್ಶ ಆಡಳಿತಗಾರ, ಸಮಾಜ ಸುಧಾರಕರು, ಸಾಮಾಜಿಕ ನ್ಯಾಯದ ಕ್ರಾಂತಿಕಾರಿ ಮತ್ತು ವಚನಕಾರರಾಗಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಮಾಜ ಸುಧಾರಣಾ ಕಾರ್ಯಗಳು ಮತ್ತು ಅವರ ಕ್ರಾಂತಿಕಾರಿ ವಿಚಾರಗಳು ೨೧ ನೇ ಶತಮಾನದಲ್ಲಿ ಬಹಳ ಪ್ರಸ್ತುತ ಎನಿಸುತ್ತವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯವನ್ನು ಬಸವಣ್ಣನವರು ೧೨ನೇ ಶತಮಾನದಲ್ಲಿ 'ಅನುಭವ ಮಂಟಪ'ದ ಮೂಲಕವಾಗಿ ಯಾವುದೇ ಜಾತಿ, ಮತ, ಧರ್ಮ, ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸೇರುತ್ತಿದ್ದರು. ಅಲ್ಲಿ ಶಿವ ಶರಣರು ಉತ್ತಮ ಸಮಾಜ ನಿರ್ಮಾಣ ಮಾಡುವ ಚರ್ಚೆಗಳನ್ನು ಮಾಡಿ, ಸಮಾಜಕ್ಕೆ ಮೌಲ್ಯಯುತವಾದ ಸಂದೇಶಗಳನ್ನು ನೀಡುತ್ತಿದ್ದರು. ಆ ಮೂಲಕವಾಗಿ ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರು ಪ್ರಮುಖ ಪಾತ್ರವಹಿಸಿದರು. ಬಸವಣ್ಣನವರು ತಮ್ಮ ಕಾಲಘಟ್ಟದಲ್ಲಿ ಕಂಡುಕೊಂಡ ತಪ್ಪು ತಡೆಗಳು, ಅಂಕು ಡೊಂಕುಗಳು ಮತ್ತು ಅಂಧಕಾರವನ್ನು ಹೋಗಲಾಡಿಸಲು ತಮ್ಮದೇ ಆದ ಹೊಸ ಶೈಲಿಯ ಜನಸಾಮಾನ್ಯರಿಗೆ ಅರ್ಥವಾಗುವಂತಹ ವಚನಗಳನ್ನು ರಚಿಸಿದರು. ಅವು ಸಾಮನ್ಯ ಜನರಿಗೂ ತಿಳಿಯವಂತಿದ್ದವು. ಹಾಗಾಗಿ, ಅವರು ವಚನ ಸಾಹಿತ್ಯದ ಮೂಲಕವಾಗಿ ಜನರ ಹೃದಯವನ್ನು ತಲುಪಿದರು. ಅನುಭವ ಮಂಟಪದಲ್ಲಿ ಬಸವಣ್ಣನವರು ಯಾವುದೇ ಲಿಂಗ ಭೇದವಿಲ್ಲದೆ ಶರಣ ಶರಣೆಯರಿಗೆ ತಮ್ಮ ಅನುಭವಗಳು ಮತ್...
Comments
Post a Comment