ನೈತಿಕ ಮೌಲ್ಯ ಆಚರಣೆಯಲ್ಲಿರಲಿ.


ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ನೈತಿಕ ಮೌಲ್ಯಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ (ವಿಶ್ಲೇಷಣೆ, ಅಭಿಮತ, ಪ್ರಜಾವಾಣಿ) ಪ್ರಕಟವಾದ ಅರವಿಂದ ಚೊಕ್ಕಾಡಿಯವರ ಲೇಖನ 'ಮೌಲಿಕ ಶಿಕ್ಷಣ : ಆಲೋಚನಾ ಕ್ರಮ' ಬಹಳ ಪ್ರಸ್ತುತವಾದ ಲೇಖನವಾಗಿ ಮೂಡಿಬಂದಿದೆ. ನಾನು ಒಬ್ಬ ಶಿಕ್ಷಕನಾಗಿ ಹಲವಾರು ಬಾರಿ ನನ್ನೊಳಗೆ ನಾನೇ ಹಲವಾರು ಸಲ ಈ ವಿಚಾರವಾಗಿ ಆತ್ಮ ವಿಮರ್ಶೆ ಮಾಡಿಕೊಂಡಿದ್ದೆನೆ. ಶಿಕ್ಷಕರಾಗಿ ನಾವು ಮಕ್ಕಳೊಂದಿಗೆ ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡಾಗ, ಮಕ್ಕಳು ಆ ವಿಷಯಗಳನ್ನು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಬಳಕೆಯಲ್ಲಿವೆ ಎಂಬುದನ್ನು ವಿಚಾರ ಮಾಡುತ್ತಾರೆ. ಒಂದು ವೇಳೆ ಶಾಲೆಯಲ್ಲಿ ಬಿತ್ತಿದ ನೈತಿಕ ಮೌಲ್ಯಗಳು ತಾನು ವಾಸಿಸುವ ಪರಿಸರದಲ್ಲಿ ಇಲ್ಲವೆಂದಾದರೇ ಶಾಲೆಯಲ್ಲಿನ ನೈತಿಕ ಮೌಲ್ಯಗಳು ಅಪ್ರಸ್ತುತ ಎನಿಸುತ್ತವೆ. ಆದರೂ, ನಮ್ಮ ಪ್ರಯತ್ನವನ್ನು ಮಾಡುತ್ತಿರಬೇಕು. ಇವತ್ತಿನ ಪ್ರಯತ್ನ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ.  ಹಾಗಾಗಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರು, ಸಮುದಾಯ ಮತ್ತು ಶಾಲೆಗಳಿಂದ ಆಗಬೇಕಾದ ಅತೀ ಅವಶ್ಯಕವಾದ ಜವಾಬ್ದಾರಿಯಾಗಿದೆ.

                       - ನಿಂಗಪ್ಪ ಮಾಳಶೆಟ್ಟಿ, ಕಾಜಿಬೀಳಗಿ, ಜಮಖಂಡಿ



Comments

  1. Super bro... ತತ್ವಗಳಿಗೆ ಬರವಿಲ್ಲವಿಲ್ಲಿ.....ತತ್ವಗಳಿಗೆ ತೊತ್ತಾಗುವವರ ಬರವಿದೆ...

    ReplyDelete

Post a Comment

Popular posts from this blog

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು